ಮಧ್ಯ ಆಫ್ರಿಕಾದ ಗಣರಾಜ್ಯ (République ಅಥವಾ ) ಮಧ್ಯ ಆಫ್ರಿಕಾದಲ್ಲಿರುವ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ ಚಾಡ್, ಪೂರ್ವಕ್ಕೆ ಸುಡಾನ್, ದಕ್ಷಿಣಕ್ಕೆ ಕಾಂಗೊ ಗಣರಾಜ್ಯ ಮತ್ತು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯಗಳು ಮತ್ತು ಪಶ್ಚಿಮಕ್ಕೆ ಕ್ಯಾಮೆರೂನ್ ದೇಶಗಳಿವೆ. ಈ ದೇಶದ ಬಹುತೇಕ ಭಾಗ ಸವಾನ್ನಾ ಹುಲ್ಲುಭೂಮಿಗಳಿವೆ. ಉತ್ತರ ಭಾಗದಲ್ಲಿ ಸ್ವಲ್ಪ ಸಹೇಲ್ ಪ್ರದೇಶ ಹಾಗು ದಕ್ಷಿಣ ಭಾಗದಲ್ಲಿ ಸ್ವಲ್ಪ ಕಾಡು ಪ್ರದೇಶಗಳಿವೆ. ಉಬಂಗಿ ನದಿಯು ಮತ್ತು ಚಾರಿ ನದಿಗಳು ಇಲ್ಲಿನ ಪ್ರಮುಖ ನದಿಗಳು.